
ಕರ್ನಾಟಕ ಸರ್ಕಾರವು ಆಡಳಿತಾತ್ಮಕ ದೃಷ್ಟಿಯಿಂದ ಐವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಗುರುವಾರ ಅಧಿಕೃತ ಆದೇಶ ಹೊರಡಿಸಿದೆ.
ಮನೋಜ್ ಜೈನ್ ಅವರನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ, ಡಾ. ತ್ರಿಲೋಕ್ ಚಂದ್ರ ಅವರನ್ನು ಯೋಜನೆ ಮತ್ತು ಅಂಕಿಅಂಶ ಇಲಾಖೆಗೆ ಹಾಗೂ ಮಂಜುಶ್ರೀ ಎನ್. ಅವರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೇಮಿಸಲಾಗಿದೆ.
ಮಂಜುನಾಥ್ ಜೆ. ಅವರನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಮತ್ತು ಪೂರ್ಣಿಮಾ ಬಿ.ಆರ್. ಅವರನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರಾಗಿ ಸರ್ಕಾರ ನಿಯೋಜಿಸಿದೆ.