International
ಹನಿಟ್ರ್ಯಾಪ್ ಬಲೆಗೆ ಬಿದ್ದ ನಾವಿಕ: ಪಾಕಿಸ್ತಾನಕ್ಕೆ ರಹಸ್ಯ ರವಾನಿಸಿದ ಆರೋಪ

ಹನಿಟ್ರ್ಯಾಪ್ ಬಲೆಗೆ ಬಿದ್ದ ನಾವಿಕ: ಪಾಕಿಸ್ತಾನಕ್ಕೆ ರಹಸ್ಯ ರವಾನಿಸಿದ ಆರೋಪ

tv9kannada2h
THE BRIEF
1

ಭಾರತೀಯ ನೌಕಾಪಡೆಯ ರಕ್ಷಣಾ ಇಲಾಖೆಯ ಅತ್ಯಂತ ರಹಸ್ಯ ಮಾಹಿತಿಗಳನ್ನು ಪಾಕಿಸ್ತಾನಿ ಬೇಹುಗಾರಿಕಾ ಸಂಸ್ಥೆಗೆ ಸೋರಿಕೆ ಮಾಡುತ್ತಿದ್ದ ನಾವಿಕ ರಾಜೇಶ್ ಎಂಬಾತನನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಂಧಿಸಲಾಗಿದೆ.

2

ಆಂಧ್ರಪ್ರದೇಶ ಮೂಲದ ರಾಜೇಶ್ ನೌಕಾಪಡೆಯಲ್ಲಿ ತಾಂತ್ರಿಕ ಹುದ್ದೆಯಲ್ಲಿದ್ದು, ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾದ ಪಾಕಿಸ್ತಾನಿ ಮಹಿಳಾ ಏಜೆಂಟರೊಬ್ಬರ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

3

ಆರೋಪಿ ಯುದ್ಧನೌಕೆಗಳ ಚಲನವಲನ, ನೌಕಾನೆಲೆಗಳ ನಕ್ಷೆ ಹಾಗೂ ಸೇನಾ ಕಾರ್ಯಾಚರಣೆಯ ದಾಖಲೆಗಳು ಮತ್ತು ಫೋಟೋಗಳನ್ನು ಆಕೆಗೆ ರವಾನಿಸುತ್ತಿದ್ದ ಎಂದು ಆರೋಪಿಸಲಾಗಿದ್ದು, ಆತನ ಮೊಬೈಲ್ ಹಾಗೂ ಲ್ಯಾಪ್‌ಟಾಪ್ ವಶಪಡಿಸಿಕೊಳ್ಳಲಾಗಿದೆ.