
ಕರ್ನಾಟಕದ ಜೆಡಿಎಸ್ ಪಕ್ಷವು ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಸ್ಟಿಂಗ್ ಆಪರೇಷನ್ ಷಡ್ಯಂತ್ರ ನಡೆಯುತ್ತಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟ್ವೀಟ್ ಮಾಡಿದೆ.
ಕಾಂಗ್ರೆಸ್ ನಾಯಕರೊಂದಿಗೆ ಬಾಗೇಪಲ್ಲಿ ಪ್ರಶಾಂತ್ ಎಂಬ ವ್ಯಕ್ತಿ ಆಪ್ತವಾಗಿರುವ ಫೋಟೋಗಳನ್ನು ಹಂಚಿಕೊಂಡಿರುವ ಜೆಡಿಎಸ್, ಇದು ಡರ್ಟಿ ಸ್ಟಿಂಗ್ ಪಾಲಿಟಿಕ್ಸ್ ಎಂದು ಟೀಕಿಸಿದೆ.
ಈ ಕ್ರಿಮಿನಲ್ಗಳು ಹಾಗೂ ಕಾಂಗ್ರೆಸ್ ನಾಯಕರ ನಡುವಿನ ಒಳಒಪ್ಪಂದವೇನು ಎಂಬುದನ್ನು ಡಿಕೆ ಶಿವಕುಮಾರ್ ಸರ್ಕಾರ ನಾಡಿನ ಜನತೆಗೆ ಸ್ಪಷ್ಟಪಡಿಸಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.