
ತೆಲುಗು ಚಿತ್ರರಂಗದ ಖ್ಯಾತ ನಟ ಸುನಿಲ್ ಅವರು ಕನ್ನಡದ 'ಕೆಜಿಎಫ್ 2' ಚಿತ್ರದ ಮೇಕಿಂಗ್, ಹೀರೋ ಎಲಿವೇಷನ್ ಮತ್ತು ಸಂಗೀತವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ಹಿಂದೆ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾದಲ್ಲಿ ನಟಿಸಿದ್ದ ಸುನಿಲ್, ಪ್ರಸ್ತುತ ಚಿಕ್ಕಣ್ಣ ನಾಯಕನಾಗಿ ನಟಿಸುತ್ತಿರುವ 'ಜೋಡೆತ್ತು' ಎಂಬ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.
ಸುಧಾಕರ್ ನಿರ್ದೇಶನದ ಮತ್ತು ಕಟ್ಟಿಗೇನಹಳ್ಳಿ ಸೋಮಶೇಖರ್ ನಿರ್ಮಾಣದ 'ಜೋಡೆತ್ತು' ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣವನ್ನು ಇತ್ತೀಚೆಗೆ ಮೈಸೂರಿನ ಹೊರವಲಯದಲ್ಲಿ ಸಾವಿರಾರು ಸಹ ಕಲಾವಿದರೊಂದಿಗೆ ಮುಗಿಸಲಾಗಿದೆ.