
ನಕಲಿ ದ್ವಿತೀಯ ಪಿಯುಸಿ ಅಂಕಪಟ್ಟಿಗಳನ್ನು ಸಲ್ಲಿಸಿ ಗ್ರಾಮ ಆಡಳಿತಾಧಿಕಾರಿ ಹುದ್ದೆ ಪಡೆದಿದ್ದ ನಾಲ್ವರಿಗೆ ಬೆಳಗಾವಿಯ ಎರಡನೇ ಜೆಎಂಎಫ್ಸಿ ನ್ಯಾಯಾಲಯವು ತಲಾ ಎರಡು ವರ್ಷಗಳ ಜೈಲು ಶಿಕ್ಷೆ ಮತ್ತು 19 ಸಾವಿರ ರೂ. ದಂಡ ವಿಧಿಸಿದೆ.
2012ರ ಸೆಪ್ಟೆಂಬರ್ 6ರಂದು ನಡೆದ ನೇಮಕಾತಿಯಲ್ಲಿ ರಾಜು ವೆಂಕಟೇಶಪ್ಪ, ಮೋಹನ್ಕುಮಾರ್, ಮಂಜುನಾಥ ಬೈಚಪ್ಪ ಮತ್ತು ಬಾಲಕೃಷ್ಣ ವೆಂಕಟಪ್ಪ ಎಂಬುವರು ಬೆಂಗಳೂರಿನ ವ್ಯಕ್ತಿಯೊಬ್ಬರಿಂದ ನಕಲಿ ಅಂಕಪಟ್ಟಿ ಪಡೆದು ವಂಚಿಸಿದ್ದರು.
ನೇಮಕಾತಿಯ ನಂತರ ದಾಖಲೆಗಳ ಪರಿಶೀಲನೆ ವೇಳೆ ವಂಚನೆ ಬಯಲಾದ ಹಿನ್ನೆಲೆಯಲ್ಲಿ ಅಂದಿನ ಜಿಲ್ಲಾಧಿಕಾರಿ ಎನ್. ಜಯರಾಮ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.