
ಕೊಪ್ಪಳದ ಕರ್ಕಿಹಳ್ಳಿ ಸಮೀಪ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ ಅಕ್ರಮ ಮಣ್ಣು ಸಾಗಾಟವನ್ನು ಬಿಜೆಪಿ ಎಂಎಲ್‌ಸಿ ಹೇಮಲತಾ ನಾಯಕ್ ತಡರಾತ್ರಿ ದಾಳಿ ನಡೆಸಿ ತಡೆಹಿಡಿದಿದ್ದಾರೆ.
ಮಣ್ಣು ಸಾಗಿಸುತ್ತಿದ್ದ ಟಿಪ್ಪರ್‌ಗಳನ್ನು ತಡೆದಾಗ, ಸ್ಥಳೀಯ ಸಿಪಿಐ ಜಯಪ್ರಕಾಶ್ ಅವರು ಮಣ್ಣು ತಮ್ಮ ಜಮೀನಿಗೆ ಬೇಕು ಮತ್ತು ದಂಡವನ್ನು ತಾವೇ ಕಟ್ಟುವುದಾಗಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಅವರು, ಸಿಪಿಐ ಜಯಪ್ರಕಾಶ್ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.