
ಹಬ್ಬಗಳು ಮತ್ತು ರಜಾದಿನಗಳ ಕಾರಣದಿಂದ ಸೆಪ್ಟೆಂಬರ್ ತಿಂಗಳಲ್ಲಿ ದೇಶಾದ್ಯಂತ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟು 13 ದಿನಗಳ ರಜೆ ಇರಲಿದೆ.
ಕರ್ನಾಟಕದಲ್ಲಿ ಗಣೇಶ ಚತುರ್ಥಿ ಸೇರಿದಂತೆ ಒಟ್ಟು 7 ದಿನ ಬ್ಯಾಂಕ್ಗಳು ಬಂದ್ ಆಗಲಿದ್ದು, ಸೆಪ್ಟೆಂಬರ್ 11, 28, 29 ಮತ್ತು 30ರಂದು ಬ್ಯಾಂಕ್ ನೌಕರರ ಮುಷ್ಕರ ನಡೆಯುವ ಸಾಧ್ಯತೆಯಿದೆ.
ಸೆಪ್ಟೆಂಬರ್ 4ರ ಕೃಷ್ಣ ಜನ್ಮಾಷ್ಟಮಿ, 14ರ ಗಣೇಶ ಚತುರ್ಥಿ ಮತ್ತು ವಿವಿಧ ರಾಜ್ಯಗಳ ಸ್ಥಳೀಯ ಹಬ್ಬಗಳ ಹಿನ್ನೆಲೆಯಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.