
ರಾಜ್ಯದಲ್ಲಿ ಬರಗಾಲ ಮತ್ತು ಮುಂಗಾರು ಮಳೆಯ ಕೊರತೆಯಿಂದಾಗಿ ಈರುಳ್ಳಿ ಇಳುವರಿ ಕುಸಿದಿದ್ದು, ವಿಜಯಪುರ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಈರುಳ್ಳಿ ದರ 60 ರಿಂದ 70 ರೂಪಾಯಿಗೆ ಏರಿಕೆಯಾಗಿದೆ.
ವಿಜಯಪುರ ಜಿಲ್ಲೆಯಲ್ಲಿ ಬಿತ್ತನೆ ಗುರಿ 20 ಸಾವಿರ ಹೆಕ್ಟೇರ್ ಇದ್ದರೂ, ಮಳೆ ಇಲ್ಲದ ಕಾರಣ ಕೇವಲ 10 ರಿಂದ 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ನಡೆದಿದೆ.
ದಾವಣಗೆರೆಯಲ್ಲೂ ಈರುಳ್ಳಿ ದರ ಕೆಜಿಗೆ 58 ರೂಪಾಯಿಗೆ ತಲುಪಿದ್ದು, ಸ್ಥಳೀಯ ಫಸಲು ಕಡಿಮೆಯಾಗಿರುವುದರಿಂದ ವ್ಯಾಪಾರಿಗಳು ಮಹಾರಾಷ್ಟ್ರದ ನಾಸಿಕ್ ಈರುಳ್ಳಿಯನ್ನು ಅವಲಂಬಿಸುವ ಅನಿವಾರ್ಯತೆ ಉಂಟಾಗಿದೆ.