
ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಆಗಸ್ಟ್ 19ರಿಂದ ಕ್ಯಾಥ್ಲ್ಯಾಬ್ ಸೇವೆ ಆರಂಭವಾಗಿದ್ದು, ಮೊದಲ ದಿನವೇ ಇಬ್ಬರು ರೋಗಿಗಳಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ₹2.50 ಲಕ್ಷದಿಂದ ₹3.50 ಲಕ್ಷ ವೆಚ್ಚವಾಗುವ ಚಿಕಿತ್ಸೆಯನ್ನು ವಿಮ್ಸ್ನಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಶೇ. 50 ರಿಯಾಯಿತಿಯಲ್ಲಿ ನೀಡಲಾಗುತ್ತಿದೆ.
ಆಂಜಿಯೋಗ್ರಾಮ್ ಪರೀಕ್ಷೆಗೆ ಹೊರಗಡೆ ₹6,000 ವೆಚ್ಚವಾದರೆ, ವಿಮ್ಸ್ನಲ್ಲಿ ಇನ್ನುಮುಂದೆ ಕೇವಲ ₹3,000ಕ್ಕೆ ಲಭ್ಯವಿದ್ದು, ಎಸ್ಸಿ-ಎಸ್ಟಿ ವರ್ಗದವರಿಗೆ ಸಂಪೂರ್ಣ ಉಚಿತವಾಗಿದೆ.