
ಶುಭ್ಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡವು ಶ್ರೀಲಂಕಾ ವಿರುದ್ಧ ಆಗಸ್ಟ್ 15 ರಿಂದ ಆರಂಭವಾಗಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು, ಇದು ಡಬ್ಲ್ಯೂಟಿಸಿ ಫೈನಲ್ ರೇಸ್‌ಗೆ ಅತ್ಯಂತ ನಿರ್ಣಾಯಕವಾಗಿದೆ.
ಪ್ರಸ್ತುತ 9 ಟೆಸ್ಟ್‌ಗಳಲ್ಲಿ 4 ಗೆಲುವು, 4 ಸೋಲು ಹಾಗೂ 1 ಡ್ರಾದೊಂದಿಗೆ 48.15% ಗೆಲುವಿನ ದರ ಹೊಂದಿರುವ ಭಾರತ ತಂಡವು ಡಬ್ಲ್ಯೂಟಿಸಿ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಭಾರತ ಈ ಸರಣಿಯನ್ನು 2-0 ಇಂದ ಗೆದ್ದರೆ ಗೆಲುವಿನ ಶೇಕಡಾವಾರು 57.58 ಕ್ಕೆ ಏರಿ 4ನೇ ಸ್ಥಾನ ಪಡೆಯಲಿದೆ, ಆದರೆ 0-2 ಇಂದ ಸೋತರೆ 39.39% ಗೆ ಕುಸಿದು ಫೈನಲ್ ರೇಸ್‌ನಿಂದ ಭಾಗಶಃ ಹೊರಬೀಳಲಿದೆ.