
13,000 ಕೋಟಿ ರೂ. ಮೌಲ್ಯದ ಡ್ರಗ್ಸ್ ಪ್ರಕರಣದ ಪ್ರಮುಖ ಆರೋಪಿ ವೀರೇಂದ್ರ ಸಿಂಗ್ ಬಸೋಯಾನನ್ನು ಯುಎಇಯಿಂದ ಭಾರತಕ್ಕೆ ಕರೆತರಲಾಗಿದ್ದು, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ವಶಕ್ಕೆ ಪಡೆದಿದೆ.
ಇಂಟರ್ಪೋಲ್ ಹೊರಡಿಸಿದ್ದ ರೆಡ್ ಕಾರ್ನರ್ ನೋಟಿಸ್ ಆಧಾರದ ಮೇಲೆ ಜೂನ್ ತಿಂಗಳಲ್ಲಿ ಬಂಧಿಸಲಾದ ಬಸೋಯಾನನ್ನು ಏರ್ ಇಂಡಿಯಾ ವಿಮಾನ ಸಂಖ್ಯೆ 4310ರಲ್ಲಿ ದುಬೈನಿಂದ ಕರೆತರಲಾಗಿದೆ.
ಪುಣೆಯಲ್ಲಿ ಫೆಬ್ರವರಿ 21, 2024ರಂದು 970 ಕೆಜಿ ಗಾಂಜಾ ವಶಪಡಿಸಿಕೊಂಡ ಪ್ರಕರಣದಲ್ಲಿ ಬಸೋಯಾ ಪ್ರಮುಖ ಸೂತ್ರಧಾರಿಯಾಗಿದ್ದು, ಈತ ಲಂಡನ್ಗೆ ಮಾದಕ ವಸ್ತು ಸಾಗಿಸುವ ಜಾಲ ನಡೆಸುತ್ತಿದ್ದ.