
ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ರಾಜ್ಯ ಸರ್ಕಾರ ಐಪಿಎಸ್ ಶಶಿಕುಮಾರ್ ನೇತೃತ್ವದಲ್ಲಿ ಎಸ್ಐಟಿ ತಂಡವನ್ನು ರಚಿಸಿದೆ. ಮಂಗಳೂರಿನಲ್ಲಿ ನಡೆದ ಮೊದಲ ಸಭೆಯಲ್ಲಿ ಸಿಐಡಿ ಎಸ್ಪಿಯಾಗಿದ್ದ ಲೋಕೇಶ್ ಬಿ ಜಗಲ್ಸರ್ ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಖಡಕ್ ಪೊಲೀಸ್ ಅಧಿಕಾರಿಯಾಗಿರುವ ಲೋಕೇಶ್ ಬಿ ಜಗಲ್ಸರ್ ಅವರು ಈ ಹಿಂದೆ ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಹಾಗೂ ಬೆಂಗಳೂರಿನಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಲೋಕೇಶ್ ಬಿ ಜಗಲ್ಸರ್ ಅವರು ಈ ಹಿಂದೆ 7.11 ಕೋಟಿ ರೂ. ದರೋಡೆಯಿಂದ ಹಿಡಿದು ಹೈಪ್ರೊಫೈಲ್ ಸಿಜೆ ರಾಯ್ ಪ್ರಕರಣದವರೆಗೆ ಹಲವಾರು ಪ್ರಮುಖ ಹೈಪ್ರೊಫೈಲ್ ಕೇಸ್ಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.