Indian Politics
ಸೌಜನ್ಯ ಕೊಲೆ ಮರುತನಿಖೆಗೆ ಎಸ್​​ಐಟಿ ರಚನೆ: ತನಿಖಾಧಿಕಾರಿಯಾಗಿ ಲೋಕೇಶ್ ಜಗಲ್ಸರ್ ನೇಮಕ

ಸೌಜನ್ಯ ಕೊಲೆ ಮರುತನಿಖೆಗೆ ಎಸ್​​ಐಟಿ ರಚನೆ: ತನಿಖಾಧಿಕಾರಿಯಾಗಿ ಲೋಕೇಶ್ ಜಗಲ್ಸರ್ ನೇಮಕ

tv9kannada36m
THE BRIEF
1

ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರುತನಿಖೆಗೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ರಾಜ್ಯ ಸರ್ಕಾರ ಐಪಿಎಸ್ ಶಶಿಕುಮಾರ್ ನೇತೃತ್ವದಲ್ಲಿ ಎಸ್​​ಐಟಿ ತಂಡವನ್ನು ರಚಿಸಿದೆ. ಮಂಗಳೂರಿನಲ್ಲಿ ನಡೆದ ಮೊದಲ ಸಭೆಯಲ್ಲಿ ಸಿಐಡಿ ಎಸ್ಪಿಯಾಗಿದ್ದ ಲೋಕೇಶ್ ಬಿ ಜಗಲ್ಸರ್ ಅವರನ್ನು ಪ್ರಕರಣದ ತನಿಖಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

2

ಖಡಕ್ ಪೊಲೀಸ್ ಅಧಿಕಾರಿಯಾಗಿರುವ ಲೋಕೇಶ್ ಬಿ ಜಗಲ್ಸರ್ ಅವರು ಈ ಹಿಂದೆ ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಎಸ್ಪಿಯಾಗಿ ಹಾಗೂ ಬೆಂಗಳೂರಿನಲ್ಲಿ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

3

ಲೋಕೇಶ್ ಬಿ ಜಗಲ್ಸರ್ ಅವರು ಈ ಹಿಂದೆ 7.11 ಕೋಟಿ ರೂ. ದರೋಡೆಯಿಂದ ಹಿಡಿದು ಹೈಪ್ರೊಫೈಲ್ ಸಿಜೆ ರಾಯ್ ಪ್ರಕರಣದವರೆಗೆ ಹಲವಾರು ಪ್ರಮುಖ ಹೈಪ್ರೊಫೈಲ್ ಕೇಸ್‌ಗಳನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.