
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ನೋಗೆ 178 ಪ್ರಯಾಣಿಕರೊಂದಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಹೈಜಾಕ್ ಬೆದರಿಕೆ ಪತ್ರ ಪತ್ತೆಯಾದ ಹಿನ್ನೆಲೆಯಲ್ಲಿ ವಿಮಾನವು ವಾಪಸ್ ಲ್ಯಾಂಡ್ ಆಗಿದೆ.
ವಿಮಾನದ ಶೌಚಾಲಯದಲ್ಲಿ ಪತ್ತೆಯಾದ ಪತ್ರದಲ್ಲಿ ಸಂಜೆ 6:30ಕ್ಕೆ ವಿಮಾನ ಹೈಜಾಕ್ ಆಗಲಿದೆ ಎಂದು ಬರೆಯಲಾಗಿದ್ದು, ಪೈಲಟ್ ಎಟಿಸಿ ಸಂಪರ್ಕಿಸಿ ಎಚ್ಚರಿಕೆ ವಹಿಸಿ ವಾಪಸ್ ಬಂದಿದ್ದಾರೆ.
ಭದ್ರತಾ ಸಿಬ್ಬಂದಿ ಎಲ್ಲಾ 178 ಪ್ರಯಾಣಿಕರನ್ನು ಕೆಳಗಿಳಿಸಿ ತಪಾಸಣೆ ನಡೆಸಿದ್ದು, ಪತ್ರವಿಟ್ಟವರ ಬಗ್ಗೆ ಪೊಲೀಸರು ತೀವ್ರ ವಿಚಾರಣೆ ಮುಂದುವರಿಸಿದ್ದಾರೆ.