
ಗುಜರಾತ್ನ ಸೂರತ್ ನಗರದಲ್ಲಿ ಮನೆಯ ಜವಾಬ್ದಾರಿಗಳ ಕುರಿತು ಬುದ್ಧಿ ಹೇಳಿ ಮೊಬೈಲ್ ಒಡೆದಿದ್ದಕ್ಕೆ 22 ವರ್ಷದ ಮಗಳು ತಂದೆಯನ್ನು ಹತ್ಯೆ ಮಾಡಿದ್ದಾಳೆ.
ಆರೋಪಿ ಕಾಜಲ್ ಎಂಬುವವಳು ಪ್ರೆಷರ್ ಕುಕ್ಕರ್ ಮುಚ್ಚಳದಿಂದ ತಂದೆಯ ತಲೆಗೆ ಹೊಡೆದು, ಕತ್ತಿಯಿಂದ ಹೊಟ್ಟೆಗೆ ಇರಿದ್ದಾಳೆ.
ತೀವ್ರ ರಕ್ತಸ್ರಾವದಿಂದ ಮೃತಪಟ್ಟ ರಮೇಶ್ ಸಿಂಗ್ ಅವರ ಮೃತದೇಹವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ರವಾನಿಸಿ, ಆರೋಪಿಯನ್ನು ಬಂಧಿಸಿದ್ದಾರೆ.