
ಟಿಬೆಟ್‌ನಲ್ಲಿರುವ ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸಲು ಮುಂದಾಗಿರುವ ವಿಶ್ವದ ಅತಿ ದೊಡ್ಡ ಅಣೆಕಟ್ಟು ಯೋಜನೆಯು ಭವಿಷ್ಯದಲ್ಲಿ ಪ್ರವಾಹಕ್ಕೆ ಆಹ್ವಾನ ನೀಡಲಿದೆ ಎಂದು ಚೀನಾದ ಸಂಶೋಧಕರು ಎಚ್ಚರಿಸಿದ್ದಾರೆ.
೧೩೭ ಬಿಲಿಯನ್ ಡಾಲರ್ ಅಂದರೆ ಅಂದಾಜು ₹೧೧.೬೭ ಲಕ್ಷ ಕೋಟಿ ವೆಚ್ಚದಲ್ಲಿ ಈ ಅಣೆಕಟ್ಟು ನಿರ್ಮಾಣವಾಗಲಿದ್ದು, ಯುನಾನ್ ವಿಶ್ವವಿದ್ಯಾಲಯ ಹಾಗೂ ಚೀನಾ ಅಕಾಡೆಮಿ ಆಫ್ ಸೈನ್ಸಸ್‌ನ ಸಂಶೋಧಕರು ಈ ಅಧ್ಯಯನ ನಡೆಸಿದ್ದಾರೆ.
ಈ ನದಿ ನೀರಿನಲ್ಲಿ ಪಾಲು ಹೊಂದಿರುವ ಭಾರತ ಹಾಗೂ ಬಾಂಗ್ಲಾದೇಶ ಈಗಾಗಲೇ ಈ ಯೋಜನೆಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ.