
ಅಮೆರಿಕದ 18 ವರ್ಷದ ನೇಥನ್ ಥಾಮಸ್ ಮಿಯಾಮಿ ಡೇಡ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪ್ರೊಫೆಸರ್ ಆಗಿ ನೇಮಕಗೊಂಡು 306 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ನೇಥನ್ 2023ರ ಆಗಸ್ಟ್ನಿಂದ 'ಸಿ ಫಾರ್ ಇಂಜಿನಿಯರ್ಸ್' ಕೋರ್ಸ್ ಬೋಧಿಸುತ್ತಿದ್ದು, 1717ರಲ್ಲಿ ದಾಖಲೆ ನಿರ್ಮಿಸಿದ್ದ ಕಾಲಿನ್ ಮ್ಯಾಕ್ಲಾರಿನ್ ಅವರ ದಾಖಲೆಯನ್ನು ಹಿಂದಿಕ್ಕಿದ್ದಾರೆ.
10ನೇ ವಯಸ್ಸಿನಲ್ಲೇ ಕಾಲೇಜು ಪ್ರವೇಶಿಸಿದ್ದ ನೇಥನ್, 18 ವರ್ಷ 362 ದಿನಗಳ ವಯಸ್ಸಿನಲ್ಲೇ ಪ್ರೊಫೆಸರ್ ಆಗಿದ್ದ ಆಲಿಯಾ ಸಾಬುರ್ ಅವರಿಗಿಂತ 16 ದಿನ ಕಿರಿಯರಾಗಿ ಈ ಸಾಧನೆ ಮಾಡಿದ್ದಾರೆ.