
ತಮಿಳುನಾಡಿಗೆ ನಿತ್ಯ 12,000 ಕ್ಯುಸೆಕ್ ನೀರು ಬಿಡುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿದ್ದ ಆದೇಶವನ್ನು ಪರಿಶೀಲಿಸಿ, ಅದನ್ನು 6,000 ಕ್ಯುಸೆಕ್‌ಗೆ ಇಳಿಸುವಂತೆ ಕರ್ನಾಟಕ ಸರ್ಕಾರ ಮನವಿ ಮಾಡಿದೆ.
ಆಗಸ್ಟ್ 18ರ ಬೆಳಗ್ಗೆ 8 ಗಂಟೆಯ ಮಾಹಿತಿ ಪ್ರಕಾರ, ಬಿಳಿಗುಂಡ್ಲುವಿನಲ್ಲಿ 1,55,250 ಕ್ಯೂಸೆಕ್ ನೀರು ಸಂಗ್ರಹವಿದ್ದು, ರಾಜ್ಯದ ನಾಲ್ಕು ಜಲಾಶಯಗಳಲ್ಲಿ ಕೇವಲ 77.907 ಟಿಎಂಸಿಎಫ್‌ಟಿ ನೀರು ಲಭ್ಯವಿದೆ.
ಜಲಾಶಯಗಳಿಗೆ ಒಳಹರಿವು ಕುಸಿದಿದ್ದು, ಮುಂಗಾರು ಮಳೆ ಕೊರತೆಯಿಂದಾಗಿ ರಾಜ್ಯದ ಹಿತಾಸಕ್ತಿಗೆ ಧಕ್ಕೆಯಾಗದಂತೆ ನೀರು ಬಿಡುಗಡೆ ಪ್ರಮಾಣವನ್ನು ತಕ್ಷಣವೇ ಕಡಿಮೆ ಮಾಡಬೇಕೆಂದು ಜಲಸಂಪನ್ಮೂಲ ಇಲಾಖೆ ಕೋರಿದೆ.