ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್ ವಿಭಾಗದಲ್ಲಿ ಪೊಲೀಸರು ನಡೆಸಿದ 'ಆಪರೇಷನ್ ಮುಕ್ತ' ಕಾರ್ಯಾಚರಣೆಯಲ್ಲಿ 53 ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಬಂಧಿಸಲಾಗಿದೆ.
ಒಟ್ಟು 23 ತಂಡಗಳ ಮೂಲಕ 50 ಸ್ಥಳಗಳಲ್ಲಿ ನಡೆಸಿದ ತಪಾಸಣೆಯಲ್ಲಿ 3,000 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ದಾಖಲೆಗಳಿಲ್ಲದವರನ್ನು ವಲಸಿಗರ ಕೇಂದ್ರಕ್ಕೆ ಕಳುಹಿಸಲಾಗಿದೆ.
ಕಳೆದ ಒಂದು ವರ್ಷದಲ್ಲಿ ಇದೇ ಭಾಗದಲ್ಲಿ 64 ಅಕ್ರಮ ವಲಸಿಗರನ್ನು ಬಂಧಿಸಿ ಗಡಿಪಾರು ಮಾಡಲಾಗಿದ್ದು, ಮನೆ ಮಾಲೀಕರು ಬಾಡಿಗೆದಾರರ ದಾಖಲೆ ಪರಿಶೀಲಿಸುವಂತೆ ಪೊಲೀಸರು ಸೂಚಿಸಿದ್ದಾರೆ.