
ಕರ್ನಾಟಕದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಟ್ರಸ್ಟ್ ಆಸ್ಪತ್ರೆಗಳ ಬಿಲ್ಗಳಲ್ಲಿ ಇನ್ಮುಂದೆ ಔಷಧಗಳ ಖರೀದಿ ಬೆಲೆಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಆಹಾರ ಮತ್ತು ಔಷಧ ಆಡಳಿತ ಶನಿವಾರ ಮಹತ್ವದ ಆದೇಶ ಹೊರಡಿಸಿದೆ.
ನವೆಂಬರ್ 1ರಿಂದ ಜಾರಿಗೆ ಬರಲಿರುವ ಈ ಹೊಸ ನಿಯಮವು ಆಸ್ಪತ್ರೆಗಳ ಬಿಲ್ಲಿಂಗ್ನಲ್ಲಿ ಪಾರದರ್ಶಕತೆ ತರಲು ಮತ್ತು ಗ್ರಾಹಕರಿಗೆ ಆಗುವ ಅನ್ಯಾಯ ತಡೆಯಲು ಸಹಕಾರಿಯಾಗಿದೆ.
ಔಷಧದ ಹೆಸರು, ಬ್ರ್ಯಾಂಡ್, ಬ್ಯಾಚ್ ನಂಬರ್, ತಯಾರಿಕೆ ಹಾಗೂ ಎಕ್ಸ್ಪೈರಿ ದಿನಾಂಕ ಬಿಲ್ನಲ್ಲಿ ಇರಬೇಕು ಮತ್ತು ರೋಗಿಗೆ ವಿಧಿಸುವ ದರ ಎಂಆರ್ಪಿ ಮೀರಬಾರದು ಎಂದು ಎಫ್ಡಿಎ ಸೂಚಿಸಿದೆ.