
ಹಾವೇರಿ ಜಿಲ್ಲೆಯ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ (ವಿಎಒ) ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಶಂಕರ್ ಬನ್ನೂರು ವಿರುದ್ಧ ಅಧಿಕೃತವಾಗಿ ಎಫ್ಐಆರ್ ದಾಖಲಾಗಿದೆ.
ಅಕ್ಟೋಬರ್ 4ರಂದು ನಡೆದ ವಿಎಒ ಪರೀಕ್ಷೆಯನ್ನು ಬರೆದಿದ್ದ ಶಂಕರ್ ಬನ್ನೂರು, ಮೊಬೈಲ್ ಬಳಕೆ ಮಾಡಿಕೊಂಡು ನಕಲು ಮಾಡಿರುವುದು ತನಿಖೆಯಿಂದ ಬಹಿರಂಗಗೊಂಡಿದೆ.
ಪೊಲೀಸ್ ಕಾನ್ಸ್ಟೇಬಲ್ ಪರೀಕ್ಷೆಯಲ್ಲಿ ಕೇವಲ 25 ಅಂಕಗಳನ್ನು ಪಡೆದಿದ್ದ ಈಾತ, ವಿಎಒ ಪರೀಕ್ಷೆಯಲ್ಲಿ ಬರೋಬ್ಬರಿ 151 ಅಂಕಗಳನ್ನು ಗಳಿಸಿರುವುದು ಈ ಅಕ್ರಮ ಪ್ರಕರಣ ಬಯಲಾಗಲು ಮುಖ್ಯ ಕಾರಣವಾಗಿದೆ.