
2025ನೇ ಸಾಲಿನಲ್ಲಿ ದೇಶಾದ್ಯಂತ ಸರ್ಕಾರಿ ಸಂಸ್ಥೆಗಳ ವಿರುದ್ಧ ಒಟ್ಟು 70,584 ಭ್ರಷ್ಟಾಚಾರ ದೂರುಗಳು ದಾಖಲಾಗಿವೆ ಎಂದು ಕೇಂದ್ರ ಜಾಗೃತ ಆಯೋಗದ ವಾರ್ಷಿಕ ವರದಿ ತಿಳಿಸಿದೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳ ವಿರುದ್ಧ 9,933 ಮತ್ತು ಭಾರತೀಯ ರೈಲ್ವೆ ಇಲಾಖೆಯ ವಿರುದ್ಧ 9,381 ದೂರುಗಳು ದಾಖಲಾಗಿದ್ದು, ಇವು ಮೊದಲ ಎರಡು ಸ್ಥಾನಗಳಲ್ಲಿವೆ.
ದಾಖಲಾದ ದೂರುಗಳ ಪೈಕಿ 64,905 ಪ್ರಕರಣಗಳನ್ನು ಡಿಸೆಂಬರ್ 31, 2025ರೊಳಗೆ ಇತ್ಯರ್ಥಪಡಿಸಲಾಗಿದ್ದು, ಇನ್ನೂ 5,679 ದೂರುಗಳು ಬಾಕಿ ಉಳಿದಿವೆ ಎಂದು ವರದಿ ಹೇಳಿದೆ.