
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ನ್ಯೂ ಡೆಲ್ಲಿ ಟೈಗರ್ಸ್ ನೀಡಿದ 156 ರನ್ ಗುರಿಯನ್ನು ಬೆನ್ನಟ್ಟಿದ ಔಟರ್ ಡೆಲ್ಲಿ ವಾರಿಯರ್ಸ್ ಕೊನೆಯ ಎಸೆತದಲ್ಲಿ ರನೌಟ್ ಆಗಿ ಪಂದ್ಯ ಟೈ ಮಾಡಿಕೊಂಡಿತು.
ನ್ಯೂ ಡೆಲ್ಲಿ ಟೈಗರ್ಸ್ ನಾಯಕ ಹಿಮ್ಮತ್ ಸಿಂಗ್ ಹತಾಶೆಯಿಂದ ಚೆಂಡನ್ನು ಒದ್ದಾಗ ಅದು ವಿಕೆಟ್ಗೆ ಬಡಿದು ಬ್ಯಾಟರ್ ಔಟ್ ಆದರು, ನಂತರ ನಡೆದ ಸೂಪರ್ ಓವರ್ನಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ ಜಯ ಸಾಧಿಸಿತು.
ಸೂಪರ್ ಓವರ್ನಲ್ಲಿ ಮೊದಲು ಬ್ಯಾಟ್ ಮಾಡಿದ ಔಟರ್ ಡೆಲ್ಲಿ ವಾರಿಯರ್ಸ್ 20 ರನ್ ಗಳಿಸಿತು, ಇದಕ್ಕೆ ಪ್ರತಿಯಾಗಿ ನ್ಯೂ ಡೆಲ್ಲಿ ಟೈಗರ್ಸ್ 3 ಎಸೆತಗಳಲ್ಲಿ 6 ರನ್ ಗಳಿಸಿ ಸೋಲೊಪ್ಪಿಕೊಂಡಿತು.