International
ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ ಹೆಚ್ಚಳಕ್ಕೆ ಭಾರತ ವಿರೋಧ

ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ ಹೆಚ್ಚಳಕ್ಕೆ ಭಾರತ ವಿರೋಧ

tv9kannada43m
THE BRIEF
1

ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಬಂಧನಕ್ಕೆ ನೀಡುವ ಬಹುಮಾನವನ್ನು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯು 20 ಲಕ್ಷ ಪಿಕೆಆರ್‌ನಿಂದ 70 ಲಕ್ಷ ಪಿಕೆಆರ್ ಗೆ ಏರಿಸಿದೆ.

2

ಪಾಕಿಸ್ತಾನದ ಈ ನಿರ್ಧಾರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಗತ್ತಿನ ಕಣ್ಣಿಗೆ ಮಣ್ಣೆರಚುವ ಡೋಂಗಿ ತಂತ್ರ ಎಂದು ಟೀಕಿಸಿದ್ದು, ಉಗ್ರನ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.

3

ಅಕ್ಟೋಬರ್‌ನಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಪ್ಲೀನರಿ ಸಭೆ ನಡೆಯಲಿದ್ದು, ಗ್ರೇ ಲಿಸ್ಟ್‌ನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಈ ತಂತ್ರ ಹೂಡಿದೆ ಎಂದು ಭಾರತ ಆರೋಪಿಸಿದೆ.