
ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಬಂಧನಕ್ಕೆ ನೀಡುವ ಬಹುಮಾನವನ್ನು ಪಾಕಿಸ್ತಾನದ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯು 20 ಲಕ್ಷ ಪಿಕೆಆರ್ನಿಂದ 70 ಲಕ್ಷ ಪಿಕೆಆರ್ ಗೆ ಏರಿಸಿದೆ.
ಪಾಕಿಸ್ತಾನದ ಈ ನಿರ್ಧಾರವನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜಗತ್ತಿನ ಕಣ್ಣಿಗೆ ಮಣ್ಣೆರಚುವ ಡೋಂಗಿ ತಂತ್ರ ಎಂದು ಟೀಕಿಸಿದ್ದು, ಉಗ್ರನ ವಿರುದ್ಧ ತಕ್ಷಣವೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ.
ಅಕ್ಟೋಬರ್ನಲ್ಲಿ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಪ್ಲೀನರಿ ಸಭೆ ನಡೆಯಲಿದ್ದು, ಗ್ರೇ ಲಿಸ್ಟ್ನಿಂದ ತಪ್ಪಿಸಿಕೊಳ್ಳಲು ಪಾಕಿಸ್ತಾನ ಈ ತಂತ್ರ ಹೂಡಿದೆ ಎಂದು ಭಾರತ ಆರೋಪಿಸಿದೆ.