
ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು 55 ರನ್ಗಳಿಗೆ ಆಲೌಟ್ ಮಾಡಿ ಭಾರತ ಸುಲಭ ಜಯ ಸಾಧಿಸಿದಾಗ, ಪಾಕ್ ಅಭಿಮಾನಿಗಳು ಭಾರತೀಯ ಆಟಗಾರ್ತಿ ಕ್ರಾಂತಿ ಗೌಡ್ ಅವರನ್ನು ಉದ್ದೇಶಿಸಿ ಅನುಚಿತವಾಗಿ ವರ್ತಿಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ ಪಾಕಿಸ್ತಾನದ ಅಭಿಮಾನಿಗಳು ಕ್ರಾಂತಿ ಗೌಡ್ ಅವರನ್ನು 'ಹುಡುಗ' ಎಂದು ಕರೆಯುತ್ತಾ ಅಸಹ್ಯಕರ ಕಾಮೆಂಟ್ ಮಾಡುತ್ತಿರುವುದು ಕಂಡುಬಂದಿದೆ.
ಈ ಪಂದ್ಯದಲ್ಲಿ ಭಾರತ ತಂಡವು ಕೇವಲ 8.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 57 ರನ್ ಗಳಿಸುವ ಮೂಲಕ ಏಕಪಕ್ಷೀಯ ಗೆಲುವು ದಾಖಲಿಸಿತು.