
ದೇಶದ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಲಕ್ಷಾಂತರ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಐಐಐಟಿ ಬೆಂಗಳೂರು ವಿದ್ಯಾರ್ಥಿಗಳು 'ನ್ಯಾಯ ಸೇತು' ಎಂಬ ವಿನೂತನ ಕೃತಕ ಬುದ್ಧಿಮತ್ತೆ (ಎಐ) ಸಾಧನವನ್ನು ಅಭಿವೃದ್ಧಿಪಡಿಸಿದ್ದಾರೆ.
ಹರ್ಷಿತ್ ಖಟ್ಟರ್, ಆರುಷ್ ಗುಪ್ತಾ, ಉತ್ಕರ್ಷ್ ಗುಪ್ತಾ ಮತ್ತು ಆದರ್ಶ್ ಸಿಂಗ್ ಅವರನ್ನೊಳಗೊಂಡ ತಂಡ ರೂಪಿಸಿರುವ ಈ ಟೂಲ್, ಲೋಕ ಅದಾಲತ್ ಅಥವಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವಿರುವ ಪ್ರಕರಣಗಳನ್ನು ಗುರುತಿಸಿ ಶಿಫಾರಸು ಮಾಡುತ್ತದೆ.
'ಐಡಿಯಾಸ್ ಫಾರ್ ಇಂಡಿಯಾ ಇನ್ನೋವೇಶನ್ ಚಾಲೆಂಜ್ 2026' ಸ್ಪರ್ಧೆಯಲ್ಲಿ 'ಇನ್ಕ್ಲೂಸಿವ್ ಇನ್ನೋವೇಶನ್ ಫಾರ್ ಭಾರತ್' ವಿಭಾಗದಲ್ಲಿ ಈ ತಂಡ ಪ್ರಶಸ್ತಿಯನ್ನು ಗಳಿಸಿದೆ.