
ಓಲಾ, ಉಬರ್ ಮತ್ತು ರ್ಯಾಪಿಡೋದಂತಹ ಆ್ಯಪ್ಗಳಲ್ಲಿ ರೈಡ್ ಬುಕ್ ಮಾಡುವಾಗ ಚಾಲಕರಿಗೆ ಮುಂಗಡವಾಗಿ ಟಿಪ್ಸ್ ನೀಡುವ ಆಯ್ಕೆಯನ್ನು ತಕ್ಷಣವೇ ರದ್ದುಗೊಳಿಸುವಂತೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ ಆದೇಶಿಸಿದೆ.
ಬುಕಿಂಗ್ ಸಮಯದಲ್ಲಿ 20ರಿಂದ 100 ರೂ.ವರೆಗೆ ಟಿಪ್ಸ್ ಕೇಳುವ ಈ ಪದ್ಧತಿಯನ್ನು ಸರ್ಕಾರವು 'ಡಾರ್ಕ್ ಪ್ಯಾಟರ್ನ್' ಮತ್ತು ಅನುಚಿತ ವ್ಯಾಪಾರ ಪ್ರಕ್ರಿಯೆ ಎಂದು ಕರೆದಿದೆ.
ಈ ಆದೇಶದಿಂದಾಗಿ ಗ್ರಾಹಕರು ಅನಗತ್ಯ ಹೆಚ್ಚುವರಿ ಹಣ ಪಾವತಿಸುವುದರಿಂದ ಮುಕ್ತಿ ಪಡೆಯಲಿದ್ದು, ರೈಡ್ ಕ್ಯಾನ್ಸಲೇಷನ್ ದರ ಕಡಿಮೆಯಾಗುವ ನಿರೀಕ್ಷೆಯಿದೆ.