
ಕೇಂದ್ರ ಸರ್ಕಾರ ಕಳುಹಿಸಿರುವ ಶಂಕಾಸ್ಪದ ಪಟ್ಟಿಯ ಆಧಾರದ ಮೇಲೆ ರಾಜ್ಯದಲ್ಲಿ ಅನರ್ಹ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸುವ ಕಾರ್ಯಾಚರಣೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಚಾಲನೆ ನೀಡಿದೆ.
ಕೇಂದ್ರ ನೀಡಿರುವ 5.01 ಲಕ್ಷ ಶಂಕಾಸ್ಪದ ಕಾರ್ಡ್‌ಗಳ ಪೈಕಿ 3.61 ಲಕ್ಷ ಕುಟುಂಬಗಳ ಆದಾಯ ಮಿತಿಗಿಂತ ಹೆಚ್ಚಿರುವುದು ಹಾಗೂ ನಕಲಿ ಕಾರ್ಡ್‌ಗಳನ್ನು ಗುರುತಿಸಲಾಗಿದ್ದು, ನವೆಂಬರ್ 30ರೊಳಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಸರ್ಕಾರಿ ನೌಕರರು, ಆದಾಯ ತೆರಿಗೆ ಪಾವತಿದಾರರು ಹಾಗೂ ನಾಲ್ಕು ಚಕ್ರಗಳ ವಾಹನ ಹೊಂದಿರುವವರ ಕಾರ್ಡ್‌ಗಳನ್ನು ಈ ಪರಿಶೀಲನೆಯಲ್ಲಿ ಹೊರಗಿಡಲಾಗುತ್ತಿದೆ.