
ಬೆಂಗಳೂರು ಪೊಲೀಸರು 'ಆಪರೇಷನ್ ಮುಕ್ತ' ಕಾರ್ಯಾಚರಣೆಯಡಿ ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್ಫೀಲ್ಡ್ ವಿಭಾಗಗಳಲ್ಲಿ ಭಾನುವಾರ 52 ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ಬಂಧಿಸಿದ್ದಾರೆ.
ಎರಡು ದಿನಗಳ ತಪಾಸಣೆಯಲ್ಲಿ ಒಟ್ಟು 2,000ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ನಡೆಸಲಾಗಿದ್ದು, ಶನಿವಾರದ 53 ಬಂಧನಗಳೊಂದಿಗೆ ಒಟ್ಟು ಬಂಧಿತರ ಸಂಖ್ಯೆ 105ಕ್ಕೆ ಏರಿಕೆಯಾಗಿದೆ.
ಬಂಧಿತರನ್ನು ನೆಲಮಂಗಲದ ಸೊಂಡೆಕೊಪ್ಪ ಬಳಿಯ ವಲಸಿಗರ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಎಫ್ಆರ್ಆರ್ಒ ಸಹಯೋಗದಲ್ಲಿ ಅವರನ್ನು ಗಡಿಪಾರು ಮಾಡುವ ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿವೆ.