
ದೇಶದ ಆರು ಷೇರುಪೇಟೆ ನೋಂದಾಯಿತ ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು (ಆರ್‌ಇಐಟಿ) ಜೂನ್ ತ್ರೈಮಾಸಿಕದಲ್ಲಿ 4.85 ಲಕ್ಷಕ್ಕೂ ಹೆಚ್ಚು ಹೂಡಿಕೆದಾರರಿಗೆ ₹3,136 ಕೋಟಿ ಲಾಭಾಂಶ ಹಂಚಿಕೆ ಮಾಡಿವೆ.
ಆರ್‌ಇಐಟಿಗಳು ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು ₹34,800 ಕೋಟಿಯನ್ನು ಹೂಡಿಕೆದಾರರಿಗೆ ಹಂಚಿಕೆ ಮಾಡಿದ್ದು, 2026-27ರ ಜೂನ್ ತ್ರೈಮಾಸಿಕದ ವೇಳೆಗೆ ಒಟ್ಟು ಸಂಪತ್ತಿನ ನಿರ್ವಹಣಾ ಮೌಲ್ಯ ₹3.17 ಲಕ್ಷ ಕೋಟಿಯಾಗಿದೆ.
ಈ ಆರು ಟ್ರಸ್ಟ್‌ಗಳು ದೇಶದಾದ್ಯಂತ ಒಟ್ಟು 21.4 ಕೋಟಿಗೂ ಹೆಚ್ಚು ಚದರ ಅಡಿ ವಿಸ್ತೀರ್ಣದ 'ಎ ದರ್ಜೆ'ಯ ಕಚೇರಿ ಮತ್ತು ರಿಟೇಲ್ ವಹಿವಾಟು ಸ್ಥಳಗಳನ್ನು ನಿರ್ವಹಿಸುತ್ತಿವೆ.