ಪ್ರಧಾನಿ ನರೇಂದ್ರ ಮೋದಿ ಅವರ ವಿಡಿಯೋವನ್ನು ಫೇಸ್ಬುಕ್ನಲ್ಲಿ ಬ್ಲಾಕ್ ಮಾಡಿದ್ದಕ್ಕೆ ಮೆಟಾ ಸಂಸ್ಥೆಯು ತಾಂತ್ರಿಕ ದೋಷವೇ ಕಾರಣ ಎಂದು ಸ್ಪಷ್ಟನೆ ನೀಡಿದೆ.
ನೀಟ್ ಪೇಪರ್ ಲೀಕ್ ಪ್ರಕರಣದ ಕುರಿತು ಪ್ರಧಾನಿ ಮಾತನಾಡಿದ್ದ ವಿಡಿಯೋವನ್ನು 'ಅನ್ಅವೈಲಬಲ್' ಎಂದು ತೋರಿಸಿದ್ದರಿಂದ ಬಿಜೆಪಿ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದ್ದು, ವಿಡಿಯೋ ಈಗ ಮತ್ತೆ ಲಭ್ಯವಿದೆ ಎಂದು ಮೆಟಾ ವಕ್ತಾರರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.