Health & Environment
ಬೀದರ್: ಮಾಂಜ್ರಾ ನದಿಗೆ ತ್ಯಾಜ್ಯ ಬಿಡುವ 3 ಕಾರ್ಖಾನೆಗಳನ್ನು ಮುಚ್ಚಲು ಸಚಿವರ ಆದೇಶ

ಬೀದರ್: ಮಾಂಜ್ರಾ ನದಿಗೆ ತ್ಯಾಜ್ಯ ಬಿಡುವ 3 ಕಾರ್ಖಾನೆಗಳನ್ನು ಮುಚ್ಚಲು ಸಚಿವರ ಆದೇಶ

tv9kannada1h
THE BRIEF
1

ಬೀದರ್ ಜಿಲ್ಲೆಯ ಹುಮನಾಬಾದ್ ಕೈಗಾರಿಕಾ ಪ್ರದೇಶದಲ್ಲಿ ಮಾಂಜ್ರಾ ನದಿಗೆ ರಾಸಾಯನಿಕ ತ್ಯಾಜ್ಯ ಹರಿಸುತ್ತಿದ್ದ ಮೂರು ಕಾರ್ಖಾನೆಗಳನ್ನು ತಕ್ಷಣದಿಂದಲೇ ಮುಚ್ಚಲು ಸಚಿವ ಈಶ್ವರ್ ಖಂಡ್ರೆ ಜಿಲ್ಲಾಧಿಕಾರಿಗೆ ಆದೇಶಿಸಿದ್ದಾರೆ.

2

ಮೆ.6H ಇಂಡಸ್ಟ್ರೀಸ್, ಮೆ.ಸತ್ಯದೀಪ್ತ ಕೆ. ಇಂಡಸ್ಟ್ರೀ ಮತ್ತು ಮೆ.ಹಿಮಾಲಯ ಕೈಗಾರಿಕೆಗಳಿಗೆ ಕ್ಲೋಷರ್ ಆರ್ಡರ್ ನೀಡಲಾಗಿದ್ದು, 24 ಗಂಟೆಯೊಳಗೆ ಅನುಸರಣಾ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ.

3

ಈ ಕಾರ್ಖಾನೆಗಳು ಪ್ರತಿದಿನ ಸಾವಿರಾರು ಲೀಟರ್ ರಾಸಾಯನಿಕ ತ್ಯಾಜ್ಯವನ್ನು ಗುರುಗಂಗಾ ಹಳ್ಳಕ್ಕೆ ಬಿಡುತ್ತಿದ್ದು, ಇದರಿಂದ ಜಲಚರಗಳು ಮತ್ತು ಪ್ರಾಣಿಗಳು ಸಾವನ್ನಪ್ಪುತ್ತಿದ್ದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.