
ಮೇಕ್‌ಮೈಟ್ರಿಪ್ ಸಂಸ್ಥೆಯು ಫ್ಲೈ91 ವಿಮಾನಯಾನ ಸಂಸ್ಥೆಯೊಂದಿಗೆ ಸೇರಿ, 2026ರ ನವೆಂಬರ್ 12ರಿಂದ ಬೆಂಗಳೂರಿನಿಂದ ಲಕ್ಷದ್ವೀಪದ ಅಗತ್ತಿ ದ್ವೀಪಕ್ಕೆ ನೇರ ವಿಮಾನ ಸೇವೆ ಆರಂಭಿಸುತ್ತಿದೆ.
4 ದಿನ ಮತ್ತು 3 ರಾತ್ರಿಗಳ ಈ ಪ್ರವಾಸ ಪ್ಯಾಕೇಜ್ ದರವು ತಲಾ ಒಬ್ಬರಿಗೆ 84,898 ರೂಪಾಯಿಯಿಂದ ಆರಂಭವಾಗಲಿದ್ದು, ವಸತಿ, ಊಟ ಮತ್ತು ಟೂರ್ ಗೈಡ್ ಸೌಲಭ್ಯಗಳನ್ನು ಒಳಗೊಂಡಿದೆ.
ಪ್ರವಾಸಿಗರು ಹೆಚ್ಚುವರಿ ಶುಲ್ಕ ಪಾವತಿಸಿ ಸ್ಕೂಬಾ ಡೈವಿಂಗ್, ಸ್ನಾರ್ಕ್ಲಿಂಗ್ ಮತ್ತು ಕಯಾಕಿಂಗ್‌ನಂತಹ ಚಟುವಟಿಕೆಗಳನ್ನು ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು.