
ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಚಿವ ಸಂಪುಟ ಸಭೆಯಿಂದ ಕರಾವಳಿ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ, ಕೇವಲ ಮೀನು ಊಟ ಸವಿಯಲು ಹೋಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದರು.
ಶನಿವಾರ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಮೀನುಗಾರರ ಸಮಸ್ಯೆ ಆಲಿಸಿದ ಬಳಿಕ ಪ್ರತಿಕ್ರಿಯಿಸಿದ ಸಿಎಂ ಡಿಕೆ ಶಿವಕುಮಾರ್, ತಾನು ಈಗ ವೆಜಿಟೇರಿಯನ್ ಆಗಿದ್ದು, ಅಶೋಕ್ ಅವರಿಗೆ ಇಲ್ಲಿಂದಲೇ ತಾಜಾ ಮೀನು ಕಳುಹಿಸಿಕೊಡುವುದಾಗಿ ಹಾಸ್ಯಮಯವಾಗಿ ತಿರುಗೇಟು ನೀಡಿದರು.
ಅಳಿವೆಬಾಗಿಲಿನಲ್ಲಿ ಬೋಟ್‌ಗಳು ಹೂಳಿನಲ್ಲಿ ಸಿಲುಕಿ ಬಿದ್ದಿರುವ ಸಮಸ್ಯೆ ಪರಿಶೀಲಿಸಿದ ಸಿಎಂ, ಶಾಶ್ವತ ಪರಿಹಾರಕ್ಕಾಗಿ ಸ್ವಂತ ಡ್ರೆಡ್ಜಿಂಗ್ ಯಂತ್ರ ಖರೀದಿಸುವ ಅಥವಾ ಗುತ್ತಿಗೆಗೆ ಪಡೆಯುವ ಕುರಿತು ಸದ್ಯದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದರು.