
ಭಾರತದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್ ಸೇವೆ ಆರಂಭ ಕುರಿತ ಎಲಾನ್ ಮಸ್ಕ್ ಅವರ ಹೇಳಿಕೆ ಹಾಗೂ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆಗೆ ನಟ ಕಮಲ್ ಹಾಸನ್ ತಿರುಗೇಟು ನೀಡಿದ್ದಾರೆ.
ಯಾವುದೇ ಬಿಲಿಯನೇರ್ ಅಥವಾ ವಿದೇಶಿಗರು ದೇಶದ ನೀತಿಗಳನ್ನು ನಿರ್ದೇಶಿಸಬಾರದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಭವಿಷ್ಯವನ್ನು ಭಾರತೀಯರೇ ನಿರ್ಧರಿಸಲಿದ್ದು, ಡಿಜಿಟಲ್ ಅಂತರ ಕಡಿಮೆಗೊಳಿಸುವುದು ಮುಖ್ಯ ಎಂದು ಕಮಲ್ ಹಾಸನ್ ತಿಳಿಸಿದ್ದಾರೆ.