
ಇಂಡಿಯನ್ ಓವರ್ಸೀಸ್ ಬ್ಯಾಂಕ್ 250 ಸ್ಥಳೀಯ ಬ್ಯಾಂಕ್ ಅಧಿಕಾರಿ (LBO) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಗಸ್ಟ್ 24 ಕೊನೆಯ ದಿನಾಂಕವಾಗಿದೆ.
ಕರ್ನಾಟಕದಲ್ಲಿ 50 ಹುದ್ದೆಗಳಿದ್ದು, ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿ ಸ್ಥಳೀಯ ಭಾಷೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು ಮತ್ತು 20-30 ವರ್ಷ ವಯೋಮಿತಿಯಲ್ಲಿರಬೇಕು.
ಆಯ್ಕೆಯಾದವರಿಗೆ ಮಾಸಿಕ 48,480 ರೂ.ನಿಂದ 85,920 ರೂ.ವರೆಗೆ ಮೂಲ ವೇತನ ಸಿಗಲಿದ್ದು, ಆನ್ಲೈನ್ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.