
ಬಾಗಲಕೋಟೆಯಲ್ಲಿ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ರಾಜಕೀಯ ವೈರಿ ಮುರುಗೇಶ್ ನಿರಾಣಿ ನಾರಾಯಣಸಾ ಭಾಂಡಗೆ ಮನೆಯಲ್ಲಿ ಪರಸ್ಪರ ಭೇಟಿಯಾಗಿದ್ದಾರೆ.
ಇಬ್ಬರೂ ನಾಯಕರು ದಸರಾ ಹಬ್ಬದ ಶುಭಾಶಯ ಕೋರಿ ಒಟ್ಟಾಗಿ ಭೋಜನ ಸವಿದು ಹಬ್ಬ ಆಚರಿಸಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಧಾರವಾಡದಲ್ಲಿ ಬಿ.ವೈ. ವಿಜಯೇಂದ್ರ ಅವರನ್ನು ಭೇಟಿಯಾದ ಬೆನ್ನಲ್ಲೇ ಯತ್ನಾಳ್ ಮತ್ತೊಬ್ಬ ನಾಯಕನನ್ನು ಭೇಟಿಯಾಗಿರುವುದು ಬಿಜೆಪಿಗೆ ವಾಪಸಾಗುವ ಕುರಿತು ಚರ್ಚೆಗಳಿಗೆ ಎಡೆಮಾಡಿಕೊಟ್ಟಿದೆ.