
ಚೀನಾದ 18 ವರ್ಷದ ಯುವಕ ಮಾಕೈ, ತನ್ನ 70 ವರ್ಷದ ಅಜ್ಜ ಸರಿಯಾದ ಸಮಯಕ್ಕೆ ಔಷಧ ಸೇವಿಸುವುದನ್ನು ಮರೆಯುತ್ತಿದ್ದುದನ್ನು ಗಮನಿಸಿ ಹೊಸ ಎಐ ಅಪ್ಲಿಕೇಶನ್ ರೂಪಿಸಿದ್ದಾರೆ.
ಈ ಆಪ್ ಔಷಧ ಬಾಟಲಿಯ ಫೋಟೋ ಅಪ್‌ಲೋಡ್ ಮಾಡಿದರೆ, ಅದರ ಬಳಕೆಯ ಅವಧಿ ಮುಗಿದಾಗ ಬಳಕೆದಾರರಿಗೆ ಎಚ್ಚರಿಕೆ ನೀಡುವ ವೈಶಿಷ್ಟ್ಯವನ್ನು ಹೊಂದಿದೆ.
ಜುಲೈ 17-20ರ ನಡುವೆ ನಡೆದ ವಿಶ್ವ ಕೃತಕ ಬುದ್ಧಿಮತ್ತೆ ಸಮ್ಮೇಳನದಲ್ಲಿ ಈ ಯುವಕ ತನ್ನ ಆವಿಷ್ಕಾರವನ್ನು ಪ್ರದರ್ಶಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.