
ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ತಂಡವು 40.2 ಓವರ್ಗಳಲ್ಲಿ 185 ರನ್ಗಳಿಗೆ ಆಲೌಟ್ ಆಗಿದೆ.
ಭಾರತ ತಂಡದ ಪರ ಕರಾರುವಾಕ್ ದಾಳಿ ನಡೆಸಿದ ಅನ್ಶುಲ್ ಕಂಬೋಜ್ 10 ಓವರ್ಗಳಲ್ಲಿ ಕೇವಲ 22 ರನ್ ನೀಡಿ 2 ವಿಕೆಟ್ ಕಬಳಿಸಿ 46 ಡಾಟ್ ಬಾಲ್ಗಳನ್ನು ಎಸೆದರು.
ಕಂಬೋಜ್ಗೆ ಉತ್ತಮ ಸಾಥ್ ನೀಡಿದ ಅರ್ಷದೀಪ್ ಸಿಂಗ್ 4 ವಿಕೆಟ್ ಹಾಗೂ ಗುರ್ನೂರ್ ಬ್ರಾರ್ 3 ವಿಕೆಟ್ ಪಡೆದಿದ್ದು, ಭಾರತಕ್ಕೆ ಗೆಲ್ಲಲು 186 ರನ್ಗಳ ಗುರಿ ಸಿಕ್ಕಿದೆ.