
ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಮತ್ತು ಅವ್ಯವಹಾರಗಳ ಬಗ್ಗೆ ಜನರ ಮುಂದಿಡುವುದರಲ್ಲಿ ಯಾವುದೇ ರಾಜಿಯಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಈಗಿರುವ ಸರ್ಕಾರದ ಮಂತ್ರಿಗಳ ಅಡಿಯೇ ಕೆಪಿಎಸ್ಸಿ ಮತ್ತು ಎಇಇ ಹಗರಣಗಳು ನಡೆದಿವೆ ಎಂದು ಅವರು ಆರೋಪಿಸಿದ್ದು, ಲಕ್ಷಾಂತರ ಯುವಕರ ಭಾವನೆಗಳನ್ನು ಮಾರಾಟಕ್ಕಿಟ್ಟು ವಸೂಲಿ ಮಾಡಲಾಗಿದೆ ಎಂದಿದ್ದಾರೆ.
ತಮ್ಮ ಬಳಿ ದಾಖಲೆಗಳಿವೆ ಎಂದು ತಿಳಿಸಿರುವ ಅವರು, ಅಕ್ರಮಗಳ ಬಗ್ಗೆ ಬಾಯಿ ಮುಚ್ಚಿಕೊಂಡಿರಲು ಆಗುವುದಿಲ್ಲ ಹಾಗೂ ಅಂತಿಮ ತೀರ್ಮಾನವನ್ನು ಜನರಿಗೆ ಬಿಡುವುದಾಗಿ ಪುನರುಚ್ಛರಿಸಿದ್ದಾರೆ.