
ಪಂಜಾಬ್‌ನ ಫತೇಘರ್ ಸಾಹಿಬ್‌ನಲ್ಲಿ ಮನ್‌ವಿಂದರ್ ಕೌರ್ ಎಂಬ ಮಹಿಳೆ ತನ್ನನ್ನು ಪಿಸಿಎಸ್ ಅಧಿಕಾರಿಯೆಂದು ಪರಿಚಯಿಸಿಕೊಂಡು ಎಎಪಿ ನಾಯಕ ಅಮರಿಂದರ್ ಸಿಂಗ್ ಮಂಡೋಫಲ್ ಅವರನ್ನು ಫೆಬ್ರವರಿ 10, 2026ರಂದು ವಿವಾಹವಾಗಿದ್ದರು.
ಮದುವೆಯ ಬಳಿಕ ಆಕೆ ಮನೆಯಲ್ಲಿದ್ದ 14 ತೊಲೆ ಚಿನ್ನ, 1 ಲಕ್ಷ ರೂಪಾಯಿ ನಗದು ಮತ್ತು ಬೆಲೆಬಾಳುವ ವಸ್ತುಗಳೊಂದಿಗೆ ಪರಾರಿಯಾಗಿದ್ದು, ಈ ಹಿಂದೆ ಆಕೆಗೆ ಮದುವೆಯಾಗಿ 18 ವರ್ಷದ ಮಗನಿರುವುದು ತಿಳಿದುಬಂದಿದೆ.
ಅಮರಿಂದರ್ ಸಿಂಗ್ ಅವರ ದೂರಿನ ಮೇರೆಗೆ ಮನ್‌ವಿಂದರ್ ಕೌರ್ ಸೇರಿದಂತೆ ಆರು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.