
ಸೆಪ್ಟೆಂಬರ್ 25ರಂದು ತೆರೆಕಂಡಿರುವ ‘ಮಹಾಕಾವ್ಯ ಶ್ರೀ ರಾಮಾಯಣ ಕಥಾ’ ಸಿನಿಮಾವು ಕಥೆಗಿಂತಲೂ ಹೆಚ್ಚಾಗಿ ಕಳಪೆ ವಿಎಫ್ಎಕ್ಸ್ ಹಾಗೂ ಪೋಸ್ಟರ್ನಲ್ಲಿನ ಎಡವಟ್ಟುಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಚಿತ್ರದ ಪೋಸ್ಟರ್ ಒಂದರಲ್ಲಿ ಸುಗ್ರೀವನ ವಾನರ ಸೈನಿಕನೊಬ್ಬ ಮಾನವ ರೂಪದಲ್ಲಿ ಕಣ್ಣಿಗೆ ಕನ್ನಡಕ ಧರಿಸಿರುವುದು ಸ್ಪಷ್ಟವಾಗಿ ಕಾಣಿಸಿದ್ದು, ತ್ರೇತಾಯುಗದಲ್ಲೂ ಸ್ಪೆಕ್ಸ್ ಇತ್ತಾ ಎಂದು ನೆಟ್ಟಿಗರು ತೀವ್ರವಾಗಿ ಟ್ರೋಲ್ ಮಾಡುತ್ತಿದ್ದಾರೆ.
ಶಾಶ್ವತ್ ಎಂಬ ಮಗುವಿಗೆ ಹನುಮಂತನು ರಾಮಾಯಣದ ಕಥೆಯನ್ನು ವಿವರಿಸುವ ಈ ಚಿತ್ರದಲ್ಲಿ ದೇವ್ ಶರ್ಮಾ ಶ್ರೀರಾಮನಾಗಿ ಹಾಗೂ ಅಂಜಲಿ ಅರೋರಾ ಸೀತೆಯಾಗಿ ನಟಿಸಿದ್ದಾರೆ.