
ಮುಂಬೈನಲ್ಲಿ ನಡೆದ ಏಷ್ಯನ್ ಜೂನಿಯರ್ ಚೆಸ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಬೆಂಗಳೂರಿನ 13 ವರ್ಷದ ಪ್ರತೀತಿ ಬೋರ್ದೊಲಾಯಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ.
ಪ್ರತೀತಿ ಒಟ್ಟು 9 ಸುತ್ತುಗಳಿಂದ ಏಳೂವರೆ ಪಾಯಿಂಟ್ಸ್ ಸಂಗ್ರಹಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡರೆ, ಕಜಾಕಸ್ತಾನದ ಮರಿಯಾ ಕೊಲ್ಯಾವ್ಕೊ 7 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದಲ್ಲಿ ಭಾರತದ ಮಯಂಕ್ ಚಕ್ರವರ್ತಿ ಚಿನ್ನ ಗೆದ್ದರೆ, ಕರ್ನಾಟಕದ ಅಪೂರ್ವ ಕಾಂಬ್ಳೆ 6.5 ಪಾಯಿಂಟ್ಸ್ ಗಳಿಸಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.