
ಕನ್ನಡ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಜೀವಂತ ಆನೆಯಂತೆ ಕಾಣುವ ರೋಬೋಟಿಕ್ ಆನೆಯು ಕೋಲಾರದಲ್ಲಿ ಪ್ರದರ್ಶನಗೊಂಡು ಜನರನ್ನು ಆಕರ್ಷಿಸಿದೆ.
ಈ ರೋಬೋಟಿಕ್ ಆನೆಯು ತಲೆ, ಕಣ್ಣು, ಬಾಲ ಮತ್ತು ಕಿವಿಗಳನ್ನು ಅಲ್ಲಾಡಿಸುವುದಲ್ಲದೆ, ಸೊಂಡಿಲಿನಿಂದ ನೀರನ್ನು ಚಿಮ್ಮಿಸುವ ಸಾಮರ್ಥ್ಯ ಹೊಂದಿದೆ.
ತಮಿಳುನಾಡಿನ ಕೊಯಮತ್ತೂರಿನ ಕಲಾವಿದರು ರಬ್ಬರ್, ಫೈಬರ್ ಮತ್ತು ಸ್ಟೀಲ್ ಬಳಸಿ ಈ ರೋಬೋಟಿಕ್ ಆನೆಗಳನ್ನು ತಯಾರಿಸಿದ್ದಾರೆ.