
ಗ್ರಾಮೀಣರು ಇ-ಸ್ವತ್ತು, ಕುಡಿಯುವ ನೀರು ಮತ್ತು ರಸ್ತೆ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಲು ಡ್ಯಾಷ್ಬೋರ್ಡ್ ಆಧಾರಿತ ಆನ್ಲೈನ್ ವ್ಯವಸ್ಥೆ ರೂಪಿಸಲು ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ಗ್ರಂಥಾಲಯ ಮೇಲ್ವಿಚಾರಕರ ಕನಿಷ್ಠ ವೇತನವನ್ನು 19,201 ರೂ.ಗೆ ಹೆಚ್ಚಿಸಲಾಗಿದ್ದು, ಇದರಲ್ಲಿ 7,201 ರೂ.ಗಳನ್ನು ಲೈಬ್ರರಿ ಸೆಸ್ನಿಂದ ಪಾವತಿಸಲು ಅನುಮೋದನೆ ನೀಡಲಾಗಿದೆ.
ಗ್ರಾಮ ಪಂಚಾಯತಿಗಳಲ್ಲಿ ಅರಿವು ಕೇಂದ್ರಗಳನ್ನು ಬಲಪಡಿಸಲು ಎಐ ಆಧಾರಿತ ಕಂಪ್ಯೂಟರ್ಗಳನ್ನು ಒದಗಿಸಲಾಗುತ್ತಿದ್ದು, ವಾರಾಂತ್ಯದಲ್ಲಿ ಕಾರ್ಯನಿರ್ವಹಿಸುವ ಗ್ರಂಥಾಲಯಗಳಿಗೂ ಗೌರವಧನ ನಿಗದಿಪಡಿಸಲಾಗಿದೆ.