
ಕರ್ನಾಟಕದಲ್ಲಿ ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 8 ರೂಪಾಯಿ ಹೆಚ್ಚಳ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ನವೆಂಬರ್ 1ರಿಂದ ಜಾರಿಗೆ ಬರಲಿದೆ.
ಹೆಚ್ಚಳವಾದ 8 ರೂಪಾಯಿಗಳಲ್ಲಿ 7 ರೂಪಾಯಿಯನ್ನು ರೈತರಿಗೆ ಸಹಾಯಧನವಾಗಿ ನೀಡಲಾಗುತ್ತಿದ್ದು, ಉಳಿದ 1 ರೂಪಾಯಿ ಒಕ್ಕೂಟಗಳ ಪಾಲಾಗಲಿದೆ.
ಈ ದರ ಏರಿಕೆಯಿಂದ ಬಮುಲ್ ವ್ಯಾಪ್ತಿಯಲ್ಲಿ ರೈತರಿಗೆ ಸಿಗುತ್ತಿದ್ದ ಲೀಟರ್ ಹಾಲಿನ ಬೆಲೆ 35 ರೂಪಾಯಿಯಿಂದ 42 ರೂಪಾಯಿಗೆ ಹೆಚ್ಚಳವಾಗಲಿದೆ.