
ಬೆಂಗಳೂರಿನ ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ಚೀನಾದ ಸಿಆರ್‌ಆರ್‌ಸಿ ಸಂಸ್ಥೆಯ ನೂತನ ರೈಲುಗಳ ಸೇರ್ಪಡೆ ಮತ್ತು ಸಿಎಂಆರ್‌ಎಸ್ ಅಧಿಕಾರಿಗಳ ತಪಾಸಣೆ ಹಿನ್ನೆಲೆಯಲ್ಲಿ ಆಗಸ್ಟ್ 7ರಂದು ರೈಲು ಸಂಚಾರದಲ್ಲಿ ಬದಲಾವಣೆಯಾಗಲಿದೆ.
ಯಶವಂತಪುರದಿಂದ ಮಾದಾವರದವರೆಗಿನ (ಅಪ್ ಲೈನ್) ರೈಲು ಸೇವೆಗಳು ರಾತ್ರಿ 10:30ರಿಂದ 11:00 ಗಂಟೆಯವರೆಗೆ ನಿಯಮಿತ 10 ನಿಮಿಷಗಳ ಬದಲಾಗಿ 20 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಮಾದಾವರದಿಂದ ರೇಷ್ಮೆ ಸಂಸ್ಥೆಯವರೆಗಿನ (ಡೌನ್ ಲೈನ್) ರೈಲುಗಳು ಯಥಾಸ್ಥಿತಿಯಲ್ಲಿರಲಿದ್ದು, ಹಸಿರು ಮಾರ್ಗಕ್ಕೆ ಸೇರ್ಪಡೆಯಾಗಲಿರುವ 3 ಹೊಸ ಚೀನಾ ನಿರ್ಮಿತ ರೈಲುಗಳ ತಪಾಸಣೆಗಾಗಿ ಈ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.