
ಮಹಾರಾಷ್ಟ್ರದ ಕೊಲ್ಲಾಪುರದ ಕವಲ್ಟೆಕ್ ಧಂಗರವಾಡ ಗ್ರಾಮದ ಶಿಕ್ಷಕ ಜೀವನ್ ಮಿಥಾರಿ ಅವರು, ನಿತ್ಯ 5 ಕಿ.ಮೀ ದಟ್ಟ ಕಾಡಿನಲ್ಲಿ ನಡೆದು ಹೋಗಿ ಇಬ್ಬರು ವಿದ್ಯಾರ್ಥಿನಿಯರಿಗೆ ಪಾಠ ಬೋಧಿಸುತ್ತಿದ್ದಾರೆ.
ಕಳೆದ 13 ವರ್ಷಗಳಿಂದ ಈ ಸೇವೆಯನ್ನು ಸಲ್ಲಿಸುತ್ತಿರುವ ಅವರು, 28 ಕಿ.ಮೀ ಬೈಕ್‌ನಲ್ಲಿ ಬಂದು ನಂತರ ಕಾಡಿನ ಹಾದಿಯಲ್ಲಿ ಚಿರತೆ, ಕರಡಿಗಳಂತಹ ಪ್ರಾಣಿಗಳ ಭಯದ ನಡುವೆಯೂ ಶಾಲೆಗೆ ತಲುಪುತ್ತಾರೆ.
ಕೇವಲ ಮೂರು ಮನೆಗಳಿರುವ ಈ ಕುಗ್ರಾಮದಲ್ಲಿ ವಿದ್ಯುತ್ ಸಂಪರ್ಕವಿಲ್ಲದಿದ್ದರೂ, ಎಂಟು ಮತ್ತು ಐದು ವರ್ಷದ ಇಬ್ಬರು ಸಹೋದರಿಯರ ಭವಿಷ್ಯಕ್ಕಾಗಿ ಅವರು ಈ ಸಾಹಸಮಯ ಕಾಯಕವನ್ನು ಮುಂದುವರಿಸಿದ್ದಾರೆ.