
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ನಗರದಲ್ಲಿ ಹೊಸ ಪಾರ್ಕಿಂಗ್ ನೀತಿಯ ಕರಡು ಅಧಿಸೂಚನೆ ಹೊರಡಿಸಿದ್ದು, ರಸ್ತೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿ ಶುಲ್ಕ ನಿಗದಿಪಡಿಸಿದೆ.
A ವರ್ಗದ ರಸ್ತೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ಗಂಟೆಗೆ ₹40 ಮತ್ತು ಲಘು ವಾಹನಗಳಿಗೆ ₹80 ಪಾರ್ಕಿಂಗ್ ಶುಲ್ಕವನ್ನು ಹೊಸ ನಿಯಮದಡಿ ವಿಧಿಸಲಾಗುತ್ತದೆ.
ಖಾಲಿ ನಿವೇಶನಗಳನ್ನು ಸಾರ್ವಜನಿಕ ಪಾರ್ಕಿಂಗ್ಗೆ ನೀಡುವ ಮಾಲೀಕರಿಗೆ ಆಸ್ತಿ ತೆರಿಗೆಯಲ್ಲಿ ವಿಶೇಷ ವಿನಾಯಿತಿ ನೀಡಲು ಸರ್ಕಾರ ಪ್ರಸ್ತಾಪಿಸಿದೆ.